Skip to main content

Posts

ವರ್ತಮಾನಕ್ಕೆ ಸ್ಪಂದಿಸುತ್ತ..

ನಾನು ಶಿಸ್ತಾಗಿ ಕೂತು ಏನನ್ನಾದರೂ ನಿಯಮಿತವಾಗಿ ಬರೆದದ್ದು ಅಪರೂಪ. ಮನಸ್ಸಿನಲ್ಲಿ ಕೆಲವು ನಂಬಿಕೆಗಳು ಇದಕ್ಕೆ ಸಹಾಯಕವಾಗಿ ವರ್ತಿಸುತ್ತಿದ್ದವು. ಮೊದಲನೆಯದ್ದು ಬರವಣಿಗೆಯಲ್ಲಿ ತೊಡಗಿರುವವರು ಚಿಂತಕರು. ಅವರಿಂದ ಮಾತ್ರ ಉತ್ತಮ ಬರವಣಿಗೆ ಸಾಧ್ಯ ಎಂಬುದಾದರೆ ಎರಡನೆಯದು ಅಕ್ಷರ ಹಾದರ (ಆತ್ಮ ಸಾಕ್ಷಿಗೆ ನಿಷ್ಟವಾಗದೆ ಬರೆಯುವುದು) ಮಾಡಬಾರದು ಎಂಬುದು. ಈ ಎರಡು ಕಾರಣಗಳ ಮಾದರಿಯಲ್ಲದ, ಆಲೋಚನೆಗಳು ಮೂಡುವ ವೇಗದಲ್ಲಿ ಪದಗಳನ್ನು ಇಳಿಸಲು ಸಾಧ್ಯವಾಗದಿರುವ ಕಾರಣವೂ ಇದೆ. ಆದರೆ ಕಳೆದೊಂದು ವಾರದಿಂದ ನಡೆಯುತ್ತಿರುವ ದೇಶದಲ್ಲಿನ ರಾಜಕೀಯ ವಿದ್ಯಮಾನಗಳು ಹಾಗೂ ನನ್ನ ವೈಯುಕ್ತಿಕ ಜೀವನದಲ್ಲೂ ಆದ ಬದಲಾವಣೆಗಳು, ನನ್ನನ್ನು ಬರೆಯಲು ಕೂರಿಸಿವೆ. ನಾನು ಮತದಾನ ಮಾಡಲು ಅರ್ಹತೆ ಪಡೆದು ೨೦ ವರ್ಷಗಳೇ ದಾಟಿವೆ. ಎಂದೂ ಮತದಾನವನ್ನು ತಪ್ಪಿಸಿಕೊಂಡಿಲ್ಲ. ಪ್ರತಿಬಾರಿಯೂ ನನಗೆ ಸರಿ ತೋಚಿದ ವ್ಯಕ್ತಿ - ಪಕ್ಷಕ್ಕೆ ಬಟನ್ ಒತ್ತಿ ಬಂದಿದ್ದೇನೆ. (ಒಂದೇ ಒಂದು ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮಾತ್ರ ಬ್ಯಾಲಟ್ ಪೇಪರ್ ಮೂಲಕ ಮತಾ ಚಲಾಯಿಸಿದ್ದೆ.) ಪ್ರತಿ ಬಾರಿಯೂ ನನಗೆ ಅತಿ ಆಪ್ತವಾಗಿರುವ ಕನ್ನಡ - ಕರ್ನಾಟಕ - ಕನ್ನಡಿಗ ಕುರಿತಾದ ನೆರೇಟೀವ್ ಗೆ ಸೂಕ್ತ ಹೊಂದುವವರನ್ನು ಬೆಂಬಲಿಸುತ್ತಿದ್ದೇನೆ. ಒಮ್ಮೆ ವಿಜಯ ಸಂಕೇಶ್ವರರ ಕನ್ನಡ ನಾಡು ಪಕ್ಷಕ್ಕೂ ಬಟನ್ ಗುದ್ದಿ ಬಂದದ್ದಿದೆ. ನನಗೆ ಈಗ ಕನ್ನಡ ಕೇಂದ್ರಿತ ಪ್ರಾದೇಶಿಕ ಪಕ್ಷ ಬೇಕು ಅನ್ನೋ ಮಾತು ಸವಕಲು ನಾಣ್ಯದಂತ…
Recent posts

ನನ್ನ ಕನಸಿನ ಕರ್ನಾಟಕ

ನನ್ನ ಹೆಸರು ರೋಹಿತ್ ರಾಮಚಂದ್ರಯ್ಯ. ವಯಸ್ಸು 36 ದಾಟಿದೆ. ಊರು ಬೆಂಗಳೂರು. ವೃತ್ತಿಯಲ್ಲಿ ಸಾಫ್ಟವೇರ್ ತಂತ್ರಜ್ಞ. ಪ್ರವೃತ್ತಿ ಸಮೃದ್ಧ ಕರ್ನಾಟಕದ ಕನಸು ಕಾಣುವುದು. ಅದನ್ನು ನನ್ನ ಮಿತಿಯಲ್ಲಿ ಸಾಕಾರಗೊಳಿಸಲು ಸಹಕಾರ ತತ್ವದಡಿಯಲ್ಲಿ ದುಡಿಯುವುದು. ಸದ್ಯಕ್ಕೆ ನನ್ನ ಕಲ್ಪನೆಯಲ್ಲಿರುವ ಕರ್ನಾಟಕದ ಬಿಂಬವನ್ನು ನಿಮ್ಮ ಮನಗಳಲ್ಲಿ ಪ್ರತಿಬಿಂಬಿಸಲು ಅಣಿಯಾಗಿ ಕುಳಿತಿದ್ದೇನೆ. ಕನ್ನಡ ಎಂಬ ಪದ ಕರ್ನಾಟಕದ ನುಡಿಗೂ ಭೂಪ್ರದೇಶಕ್ಕೂ ಸಮಾನವಾಗಿ ಅನ್ವಯವಾಗುತ್ತದೆ. ಈ ಕನ್ನಡ ಭೂಪ್ರದೇಶದಲ್ಲಿ ಕಾಲಾಂತರದಲ್ಲಿ ಹಲವು ನುಡಿಗಳನ್ನಾಡುವರು ಕಲೆತು ಬಾಳುತ್ತಿದ್ದಾರೆ. ಅವರೆಲ್ಲರನ್ನು ಬಂಧಿಸಿರುವುದು ಕನ್ನಡ ನುಡಿ. ಇವರೆಲ್ಲರೂ ಕನ್ನಡಿಗರು. ಕರ್ನಾಟಕ ಮತ್ತು ಗಡಿನಾಡು ಸಮಸ್ಯೆ ಮೊದಲನೆಯದಾಗಿ ಕರ್ನಾಟಕದ ಆಡಳಿತ ಸರಳಗೊಳಿಸಿಕೊಳ್ಳಲು ಈ ನಾಡಿನ ಗಡಿಗಳನ್ನು ಗುರುತಿಸಿಕೊಳ್ಳಬೇಕಿದೆ. ಕವಿರಾಜಮಾರ್ಗದಲ್ಲಿ ಕನ್ನಡ ಪ್ರದೇಶವನ್ನು ಕಾವೇರಿಯಿಂದ ಗೋದಾವರಿ ನದಿಗಳ ನಡುವೆ ಗುರುತಿಸಲಾಗಿದೆ. 1956ರ ರಾಜ್ಯ ಪುನರ್ವಿಂಗಡಣೆ ಅನ್ವಯ ಕರ್ನಾಟಕದ ಇಂದಿನ ಗಡಿಗಳನ್ನು ಗುರುತಿಸಲಾಗಿದೆ. ಆದರೆ ಇದು ಕನ್ನಡಿಗರೆಲ್ಲರಿಗೂ ಸಮ್ಮತಿಪೂರ್ಣವಾದುದಲ್ಲ. ಈಗಲೂ ಕರ್ನಾಟಕದ ಗಡಿಗಳ ಹೊರಗೆ ನೆರೆಯ ರಾಜ್ಯಗಳಲ್ಲಿ ಕನ್ನಡ ಪ್ರದೇಶಗಳು ಸೇರಿ ಹೋಗಿವೆ. ಮುಖ್ಯವಾಗಿ ಅವನ್ನು ಕರ್ನಾಟಕದೊಳಕ್ಕೆ ತರುವ ಕಾರ್ಯವಾಗಬೇಕು. ಕರ್ನಾಟಕ ಸಮಸ್ತ ಕನ್ನಡಿಗರ ನೆಲೆವೀಡಾಗಬೇಕು. ಈಗಿನ ಕರ್ನಾಟಕದಲ್ಲಿರ…

ಕರ್ನಾಟಕಕ್ಕೊಂದು ಅಜೆಂಡಾ

ಮನೆಯಿಂದ ಹೊರಗೆ ಕಾಲಿಟ್ಟರೆ ಕಿವಿಗಡಚಿಕ್ಕುವ ಮೈಕಾಸುರನ ಹಾವಳಿ. ಇದು ಮೇ ೫ ರಂದು ಕರ್ನಾಟಕದ ವಿಧಾನಸಭೆಗಾಗಿ ನಡೆಯುವ ಚುನಾವಣೆಗಾಗಿ ನಡೆದಿರುವ ಪ್ರಚಾರದ ಒಂದು ಭಾಗವಷ್ಟೆ. ಐದು ವರ್ಷಗಳಿಂದ ರಾಜ್ಯದ ಜನರನ್ನು ಯಾಮಾರಿಸಿ, ಗುಡಿಸಿ ಗುಂಡಾಂತರ ಮಾಡಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಗಮನವೆಲ್ಲ ಈಗ ಕನ್ನಡಿಗರ ಮತಗಳನ್ನು ಪಡೆಯುವುದರ ಮೇಲೆ. ಆದರೆ ಅವರ ಜೂರತ್ತು ಹೇಗಿದೆ ನೋಡಿ, ಕರ್ನಾಟಕದ ಆಂತರಿಕ ವಿಷಯಗಳ ಬಗ್ಗೆ ಮಾತನಾಡಲಿಕ್ಕೆ, ಕನ್ನಡ ಬಾರದ ಕೇಂದ್ರ ನಾಯಕರುಗಳನ್ನು ಕರೆಸಿ, ಹಿಂದಿಯಲ್ಲೇ ಪ್ರಚಾರ ಭಾಷಣ ಮಾಡಿಸುತ್ತಿದ್ದಾರೆ. ಬಾರದ ನುಡಿಯ, ಇವರುಗಳ ಮಾತುಗಳನ್ನು ಕೇಳಿ ಕನ್ನಡಿಗರು ಇವರಿಗೆ ಮತಹಾಕಬೇಕಂತೆ. ಇನ್ನು ಚುನಾವಣೆಯಲ್ಲಿ ಚರ್ಚಿತವಾಗುತ್ತಿರುವ ವಿಷಯಗಳು ನಿಜವಾಗಿಯೂ ಕರ್ನಾಟಕದ ಜನರು ಕೇಳಬಯಸಿದಂತಹವುಗಳೇ. ಊಹ್ಞೂಂ. ಕೇಂದ್ರದಲ್ಲಿನ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವಿನ ಜಿದ್ದಾಜಿದ್ದಿಗೆ, ಕರ್ನಾಟಕವೇಕೆ ಕಣವಾಗಬೇಕು. ಕರ್ನಾಟಕದ್ದೇ ನೂರಾರು ಸಮಸ್ಯೆಗಳಿದ್ದಾವೆ. ಅವುಗಳ ಬಗ್ಗೆ ಮಾತನಾಡುವವರು ಯಾರು? ಆಡಿದರೂ ಕೆಲ ಜನಪ್ರಿಯ ವಿಚಾರಗಳನ್ನಷ್ಟೇ ನೆಪ ಮಾತ್ರಕ್ಕೆ ಎತ್ತಿಕೊಳ್ಳುತ್ತಾರೆ. ಉದಾಹರಣೆಗೆ, ಬೆಳಗಾವಿ ಗಡಿ ಸಮಸ್ಯೆ, ಕಾವೇರಿ ನದಿ ನೀರಿನ ಹಂಚಿಕೆ ವಿವಾದ. ಇವು ಮಾತ್ರ ಕನ್ನಡಿಗರ ಸಮಸ್ಯೆಗಳೇ. ನಿಜವಾಗಿಯೂ ಕರ್ನಾಟಕದಲ್ಲಿ ಇದಕ್ಕಿಂತಲೂ ಆಳವಾದ ಅನೇಕ ಚಿಂತಾಜನಕ ಸಮಸ್ಯೆಗಳಿದ್ದಾವೆ. ಅವುಗಳ ಬಗ್ಗೆ …
ವಿಶ್ವ ಕನ್ನಡ ಸಮ್ಮೇಳನ ೨೦೧೧

೨೦೧೨ರಿಂದ ಪ್ರಾರಂಭವಾಗಿರುವ ಕೆಲವು ಬ್ಲಾಗುಗಳು

ಬ್ಲಾಗ್                                                      ಲೇಖಕರು                ಊರು

ಒಲವಿನ ಕಥೆಗಳುಸೋಮೇಶ್ ಎನ್ ಗೌಡಚನ್ನಪಟ್ಟಣಮನಸ್ಸೆಂಬ ಮಲ್ಟಿಪ್ಲೆಕ್ಸ್ಸುಹಾಸ ಹೊಳ್ಳಕೋಟ- ಉಡುಪಿಗುರುರಾಜ ಪುರಾಣಿಕ್ಗುರುರಾಜ ಪುರಾಣಿಕ್ಬೆಂಗಳೂರುಯಾಂದಳ್ಳಿಕಿರಣ್ ಬಾಟ್ನಿಬೆಂಗಳೂರುಭಾವಲಯವಸಂತ ಬಿ ಈಶ್ವರಗೆರೆಬೆಂಗಳೂರುಮನಮುಟ್ಟುವ ಮಾತುಸುರೇಶ ಕುಮಾರ್ ಜೈನ್ಗೌರಿಬಿದನೂರುನೇ......ಸ..........ನಿಶಾ ಗೋಪಿನಾಥ್ಬೆಂಗಳೂರುಜಾನಕೀತನಯಕನ್ನಡಕ್ಕಾಗಿ ಮೋಹನ್ಮಡಿಕೇರಿಭಾವ ಪಯಣನಾಗಭೂಷಣ.ಜಿ.ಎ೦.ಬೆಂಗಳೂರುಮೂಕ ಮನಸಿನ ಮಾತು...ಕೀರ್ತಿ ಕುಮಾರ್ ರಾಜುತುಮಕೂರು/ಬೆಂಗಳೂರುಜೀವದನಿಸರ್ಜಾಶಂಕರ ಹರಳಿಮಠಶಿವಮೊಗ್ಗಭಾವಸ್ಪಂದನಚಂದ್ರಮತಿ ಸೋಂದಮೈಸೂರುದೂ,,,ರದ ತೀರಸೌಮ್ಯ ಎಚ್.ಆರ್ಮೈಸೂರುಮನೆ ಮನೆ ಕವಿಗೋಷ್ಠೀ, ಹಾಸನಚಂದ್ರಕಾಂತ ಪಡೆಸೂರಹಾಸನತೋಚಿದ್ದನ್ನು ಗೀಚಿದ್ದುರಂಗನಾಥ್ ಕೋಟ್ಯಾನ್ಮಂಗಳೂರುಕನಸುಗಾರಅರುಣ್ ಸಿದೊಡ್ಡಬಳ್ಳಾಪುರಸ್ಪರ್ಶಸುಚಿತ್ ಕೋಟ್ಯಾನ್ಉಡುಪಿಬಯಲ ಭಿತ್ತಿಗಿರೀಶ್ ಕೆಬೆಂಗಳೂರುಭಾವ ಕಬ್ಬಿಗಕನಕುಬೆಂಗಳೂರುಸಸೂತ್ರಅನಿರುದ್ಧ ಭಟ್ ಹಟ್ಟಿಕುದ್ರುಬೆಂಗಳೂರುತೋಚಿದ್ದು....ಗಿಚ್...ರೂಪೇಶ್ ಶಿರಾ ಕೃಷ್ಣಯ್ಯಬೆಂಗಳೂರುಭೂಮಿಮೌನದಾರಿತರೀಕೆರೆ

ಕೈಲಾಸ ದೇವಾಲಯ : ಎಲ್ಲೋರಾ

ಸ್ಥಳ: ಕೈಲಾಸ ದೇವಾಲಯ, ಎಲ್ಲೋರಾ.
ಜಿಲ್ಲೆ: ಔರಂಗಾಬಾದ್.
ರಾಜ್ಯ: ಮಹಾರಾಷ್ಟ್ರ.
ನಿರ್ಮಾತೃ: ರಾಷ್ಟ್ರಕೂಟ ದೊರೆ ಮೊದಲನೆಯ ಕೃಷ್ಣ (೮ ನೆಯ ಶತಮಾನ)

ಗಂಗರಸರ ರಾಜಧಾನಿ ಮಣ್ಣೆ : ಚಿತ್ರಗಳು

ಸ್ಥಳ:ಮಣ್ಣೆ
ತಾಲ್ಲೂಕು: ನೆಲಮಂಗಲ
ಜಿಲ್ಲೆ: ಬೆಂಗಳೂರು ಗ್ರಾಮಾಂತರ