ಅದು ಕನ್ನಡ ಸಂಸ್ಕೃತಿ, ಶೌರ್ಯ, ಬಲ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲ. ಕ್ರಿ. ಶ. ೭ನೇ ಶತಮಾನ. ಬಾದಾಮಿಯಲ್ಲಿ ಚಾಲುಕ್ಯ ಇಮ್ಮಡಿ ಪುಲಿಕೇಶಿ ರಾಜ್ಯವಾಳುತ್ತಿದ್ದ ಸಮಯ. ಅವನ ಅಸಾಧಾರಣ ಸೈನ್ಯಕ್ಕೆ 'ಕರ್ನಾಟಕ ಬಲ' ಎಂಬ ಹೆಸರು. ಉತ್ತರಾಪಥೇಶ್ವರನೆಂದು ಬೀಗುತ್ತಿದ್ದ ಹರ್ಷನನ್ನು ಸೋಲಿಸಿ ನರ್ಮದೆಗಿಂತ ಆಚೆಗೆ ಅಟ್ಟುವಷ್ಟು ಅದು ಸಮರ್ಥವಾಗಿತ್ತು. ಇದು ಕನ್ನಡಿಗರ ನಿಜ ಶಕ್ತಿ.
ಅಂತರ್ಜಾಲದಲ್ಲಿ ಹುಟ್ಟಿಕೊಂಡಿರುವ ಒಂದೊಂದು ಬ್ಲಾಗೂ, ಒಂದೊಂದು ತಾಣವೂ, ಅವುಗಳಿಗೆ ಕೊಂಡಿಯಾಗಿರುವ ಈ ಬ್ಲಾಗೂ, ತನ್ಮೂಲಕ ಅಂತರ್ಜಾಲ ಕನ್ನಡ ಬಲದ ಯೋಧರಂತಿರುವ ಈ ಎಲ್ಲ ತಾಣಗಳ ಮಾಹಿತಿ ಕಣಜವಾಗ ಬಯಸಿರುವ ಈ ಬ್ಲಾಗಿಗೆ 'ಕನ್ನಡ ಬಲ' ಎಂಬುದೇ ಅತ್ಯಂತ ಯುಕ್ತ ಹೆಸರೆಂದು ತೋರಿ, ಇದೋ ನಿಮ್ಮ ಮುಂದಿದೆ "ಕನ್ನಡ ಬಲ".
ನನ್ನ ವೈಯುಕ್ತಿಕ ಬ್ಲಾಗಾಗಿರುವುದರ ಜೊತೆಗೆಯೇ ಕನ್ನಡ ಅಂತರ್ಜಾಲ ಲೋಕದಲ್ಲಿನ ಆಗುಹೋಗುಗಳಿಗೆ ನನ್ನ ಪ್ರತಿಕ್ರಿಯೆಗಳನ್ನೂ ಇಲ್ಲಿ ದಾಖಲಿಸುವ ಇಚ್ಛೆ ನನ್ನದು.
ನಿಮ್ಮವ,
ರೋಹಿತ್.
Comments
currently i m using www.quillpad.com to type kannada fonts. do you have any kannada typing applications ( baraha , nudi bittu bere) which i can use for my blogs. Any windows app which i can install and type kannada without connecting to net will be good. u can reach me @ jakashudga@gmail.com.
Thanks,
vandanegalu nimage
-yuvapremi
-Kaligananath gudadur